ಮುಚ್ಚಿ

ಕರಕುಶಲ

Kinnal Tableau- in -Republic- Day -Parade

ಕಿನ್ನಾಳ ಪಟ್ಟಣ ಆಟಿಕೆಗಳು ಮತ್ತು ಧಾರ್ಮಿಕ ವಿಗ್ರಹಗಳಿಗೆ ಹೆಸರುವಾಸಿಯಾಗಿದೆ.

ಕಿನ್ನಾಳ ಅಗಾಧವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕಿನ್ನಾಳವು ಒಂದು ಕಾಲದಲ್ಲಿ ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಅತ್ಯಂತ ಸೊಗಸಾದ ಸುಪರಿಚಿತವಾದ ಮರದ ಕೆತ್ತನೆಗಳನ್ನು ಮಾಡಿದ್ದವು. ಹಂಪಿಯ ಪಂಪಾಪತೇಶ್ವರ ದೇವಾಲಯದ ಮರದ ರಥದಲ್ಲಿ ಕೆತ್ತಲಾದ ಪ್ರಸಿದ್ಧವಾದ ಮ್ಯೂರಲ್ ವರ್ಣಚಿತ್ರಗಳು ಇವುಗಳಲ್ಲಿ ಒಂದಾಗಿದೆಯೆಂದೂ ಕಿನ್ನಾಳದ ಕುಶಲಕರ್ಮಿಗಳ ಪೂರ್ವಜರು ಕಲೆಯಲ್ಲಿ ನಿಪುಣರೆಂದು ರುಜುವಾತಾಗಿದೆ.

ಕಿನ್ನಾಳ ಕುಶಲಕರ್ಮಿಗಳನ್ನಯ ಚಿತ್ರಕಾರರು ಎಂದು ಕರೆಯಲಾಗುತ್ತದೆ. ಆಟಿಕೆಗಳನ್ನು ತಯಾರಿಸಲು ಹಗುರ ಮರವನ್ನು ಬಳಸುತ್ತಾರೆ. ಮರದ ಆಟಿಕೆಗಳ ವಿವಿಧ ಭಾಗಗಳಲ್ಲಿ ಹುಣಿಸೆಯ ಬೀಜ ಮತ್ತು ಉರುಟು ಕಲ್ಲುಗಳನ್ನು ಬಳಸಲಾಗುತ್ತದೆ. ಸೆಣಬಿನ ಚಿಂದಿಗಳಿಂದ, ನೆನೆಸಿಡಲಾದ ತುಂಡುಗಳಾಗಿ, ಬೆಳ್ಳಿಯ ಬಣ್ಣದ ಒಣಗಿದ ಪುಡಿಯ, ಮತ್ತು ಮರ ಕೊಯ್ದ ಗರಗಸದ ಧೂಳು ಮತ್ತು ಹುಣಿಸೆ ಹಣ್ಣಿನ ಬೀಜ ಪೇಸ್ಟ್ ಮಿಶ್ರಣದಿಂದ ಕಿಟ್ಟ ತಯಾರಿಸಲಾಗುತ್ತದೆ. ಬೆಣಚುಕಲ್ಲಿನ ಪುಡಿಯನ್ನು ದ್ರವ ರೂಪದ ಅಂಟನೊಂದಿಗೆ ಮಿಶ್ರಣ ಮಾಡಿ ಚಿತ್ರದಲ್ಲಿನ ದೇಹದ ಮೇಲೆ ಅಲಂಕಾರ ಮತ್ತು ಆಭರಣದಂತೆ ಎದ್ದು ತೋರುವಂತೆ ಬಳಸಲಾಗುತ್ತದೆ. ಒಮ್ಮೆ ಚಿತ್ರದಲ್ಲಿನ ಭಾಗಗಳನ್ನು ಜೋಡಿಸಿದ ಮೇಲೆ ಕಿಟ್ಟವನ್ನು ಎಲ್ಲಾ ಭಾಗಗಳ ಮೇಲೆ ಲೇಪಿಸಿ ಸಣ್ಣ ಹತ್ತಿ ತುಂಡುಗಳನ್ನು ಹುಣಿಸೇಹಣ್ಣಿನ ದ್ರವದಿಂದ ಅಂಟಿಕೊಳ್ಳುವಂತೆ ಮಾಡಲಾಗುತ್ತದೆ. ಇದಾದ ನಂತರ ಬೆಣಚುಕಲ್ಲಿನ ದ್ರವದ ಬಣ್ಣದ ಆಧಾರದಲ್ಲಿ ಅನ್ವಯಿಸಿ ರೂಪುಗೊಳ್ಳುತ್ತದೆ.

ರಾಷ್ಟ್ರಮಟ್ಟದಲ್ಲಿ ಕಿನ್ನಾಳ ಆಟಿಕೆ ಪ್ರದರ್ಶನ

೨೦೧೩ರಲ್ಲಿ ನಡೆದ ಗಣರಾಜ್ಯ ಉತ್ಸವದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಕಿನ್ನಾಳ ಆಟಿಕೆಗಳ ಪ್ರದರ್ಶನದ ಟ್ಯಾಬ್ಲೊವನ್ನು ತಯಾರಿಸಲಾಗಿತ್ತು.