ಮುಚ್ಚಿ

ಭೂ-ದಾಖಲೆ

ಭೂಮಿ – ಭೂ ನಿರ್ವಹಣೆಯ ಸಮಗ್ರ ವ್ಯವಸ್ಥೆ

ಭೂಮಿ – ಸಮಗ್ರ ಭೂದಾಖಲೆಗಳ ನಿರ್ವಹಣೆಯ ಗಣಕ ವ್ಯವಸ್ಥೆ, ಭೂಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಭೂದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಯಡಿಯಲ್ಲಿ, ಎಲ್ಲಾ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀಕರಣಗೊಳಿಸಿ ಗಣಕೀಕೃತ ಪಹಣಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು. ಭೂದಾಖಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿ ಯಲ್ಲಾಗುವ ಮಾಲೀಕತ್ವ ಬದಲಾವಣೆ ಅಥವಾ ಇನ್ಯಾವುದೇ ಬದಲಾವಣೆಗಳನ್ನು ಕೆ ಎಲ್ ಆರ್ ಕಾಯ್ದೆ ಪ್ರಕಾರ ಮ್ಯುಟೇಶನ್ ಮುಖಾಂತರ ನಿರ್ವಹಿಸಲು ಸಹಾ ಪ್ರಾರಂಭಿಸಲಾಯಿತು. ಇದಕ್ಕಾಗಿ ರಾಜ್ಯದ ಎಲ್ಲಾ 176 ತಾಲ್ಲೂಕುಗಳು, 1 ಹೆಚ್ಚುವರಿ ತಾಲ್ಲೂಕು ಹಾಗೂ 26 ವಿಶೇಷ ತಾಲ್ಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಗಳನ್ನು ಸ್ಥಾಪಿಸಲಾಗಿದೆ.ಪ್ರತಿಯೊಂದು ಬ್ಯಾಕ್ ಆಫೀಸ್ ನಲ್ಲಿ ಎಲ್ ಆರ್ ಕಿಯಾಸ್ಕ್ ಹಾಗೂ ಅರ್ಜಿ ಕಿಯಾಸ್ಕ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ.

ಎಲ್ ಆರ್ ಕಿಯಾಸ್ಕ್ ನಲ್ಲಿ ಸರ್ಕಾರ ನಿಗಧಿಪಡಿಸಿಸುವ ಶುಲ್ಕ ಪಡೆದು ಕೆಳಗೆ ಸೂಚಿಸಿರುವ ದಾಖಲೆಗಳನ್ನು ನಾಗರೀಕರಿಗೆ ವಿತರಿಸಲಾಗುತ್ತಿದೆ, ಅಲ್ಲದೇ ಪಹಣಿಗಳನ್ನು 892 ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ, 6019 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ರಾಜ್ಯದ ವಿವಿಧ ಕಡೆ ಸ್ಥಾಪಿತವಾಗಿರುವ ಟೆಲಿ ಕೇಂದ್ರಗಳಲ್ಲೂ ಸಹ ವಿತರಿಸಲಾಗುತ್ತಿದೆ.

ನಾಗರಿಕ / ರೈತರು ನೇರವಾಗಿ ಅಪ್ಲಿಕೇಶನ್ ಕಿಯೋಸ್ಕ್ಗೆ ಆಗಮಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಮ್ಯುಟೇಶನ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಹಿಂಬರಹ ಹಾಗೂ ಅರ್ಜಿ ಸಂಖ್ಯೆಯನ್ನು ಈ ಕಿಯೋಸ್ಕ್ ನಲ್ಲಿ ನೀಡಲಾಗುತ್ತದೆ. ಅರ್ಜಿದಾರರು ಈ ಅರ್ಜಿ ಸಂಖ್ಯೆ ಬಳಸಿಕೊಂಡು ಮ್ಯುಟೇಶನ್ ಸ್ಥಿತಿಯನ್ನು ತಿಳಿಯಬಹುದು.

ಎಲ್ಲಾ ಮ್ಯುಟೇಶನ್ ವಿನಂತಿಗಳನ್ನು ಭೂಮಿ ಬ್ಯಾಕ್ ಆಫೀಸ್ ನಲ್ಲಿ ಸಂಸ್ಕರಿಸಲಾಗುತ್ತದೆ. ಭೂಮಿ ತಂತ್ರಾಂಶದಲ್ಲಿ ಬಳಕೆದಾರರ ಅನಧಿಕೃತ ಪ್ರವೇಶ ತಡೆಯಲು ಎಲ್ಲಾ ಲಾಗಿನ್ ಗಳನ್ನು ಬಯೋ ಲಾಗಿನ್ ಬೆರಳಚ್ಚು ಯಂತ್ರದ ಮುಖಾಂತರ ದೃಢೀಕರಿಸಲಾಗುತ್ತದೆ. ಎಲ್ಲಾ ಪಹಣಿಗಳನ್ನು ಪಿಕೆಐ (ಪಬ್ಲಿಕ್ ಕೀ ಇನ್ ಫ್ರಾಸ್ಟ್ರಕ್ಕ್ಚರ್) ಪರಿಕಲ್ಪನೆಯನ್ನು ಬಳಸಿಕೊಂಡು ಡಿಜಿಟಲ್ಸಹಿ ಮಾಡಲಾಗುತ್ತಿದೆ. ಕಿಯೋಸ್ಕ್ ಕೇಂದ್ರಗಳಲ್ಲಿ ಸಂಗ್ರಹಿಸಿದ ಹಣವನ್ನು ಆಯಾ ಜಿಲ್ಲಾಧಿಕಾರಿಗಳ ಪಿಡಿ ಖಾತೆ ಜಮಾ ಮಾಡಲಾಗುತ್ತಿದೆ. ಭೂಮಿಯು ಸ್ವಯಂ ಆಧಾರಿತ ಯೋಜನೆಯಾಗಿದೆ. ಭೂಮಿಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಅಂದರೆ ಯಂತ್ರಾಂಶಗಳ ಖರೀದಿ/ನಿರ್ವಹಣೆ, ಮೂಲಸೌಕರ್ಯ,ತಾಂತ್ರಿಕ ಮಾನವ ಸಂಪನ್ಮೂಲ, ಲೇಖನ ಸಾಮಾಗ್ರಿಗಳ ಖರೀದಿ ಇತ್ಯಾದಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಂಗ್ರಹಿಸಿದ ಬಳಕೆದಾರರ ಶುಲ್ಕ ದಿಂದಲೇ ಭರಿಸಲಾಗುತ್ತಿದೆ.

ಆಯಾ ತಹಸೀಲ್ದಾರ್ ಆಫೀಸ್ ಸಂಪರ್ಕಗಳು

ಕ್ರಮ ಸಂಖ್ಯೆ ಕಚೇರಿ ಹೆಸರು ದೂರವಾಣಿ ಸಂಖ್ಯೆ ಇ-ಮೇಲ್
1 ತಹಸೀಲ್ದಾರ್-ತಾಲ್ಲೂಕು ಕಚೇರಿ, ಕಾರಟಗಿ    
2 ತಹಸೀಲ್ದಾರ್-ತಾಲ್ಲೂಕು ಕಚೇರಿ, ಗಂಗಾವತಿ 08533-230929  
3 ತಹಸೀಲ್ದಾರ್-ತಾಲ್ಲೂಕು ಕಚೇರಿ, ಕೊಪ್ಪಳ 08539-220381  
4 ತಹಸೀಲ್ದಾರ್-ತಾಲ್ಲೂಕು ಕಚೇರಿ, ಕುಷ್ಠಗಿ 08536-267031  
5 ತಹಸೀಲ್ದಾರ್-ತಾಲ್ಲೂಕು ಕಚೇರಿ, ಯಲಬುರ್ಗಾ 08534-220130  

ಭೇಟಿ: https://landrecords.karnataka.gov.in/election

ಸಹಾಯಕ ಕಮೀಷನರ್ ಕಚೇರಿ

ಡಿ.ಸಿ ಆಫೀಸ್ ಕಾಂಪ್ಲೆಕ್ಸ್, ಹೊಸಪೇಟೆ ರಸ್ತೆ, ಕೊಪ್ಪಳ
ಸ್ಥಳ : ಡಿ.ಸಿ ಆಫೀಸ್ ಕಾಂಪ್ಲೆಕ್ಸ್ | ನಗರ : ಕೊಪ್ಪಳ | ಪಿನ್ ಕೋಡ್ : 583231