ಕೃಷಿ ಕರ್ನಾಟಕದಲ್ಲ್ಲಿಶತಮಾನಗಳ ಹಿಂದಿನಿಂದಲೂ,ಇಂದಿಗೂ ರಾಜ್ಯದ ಬಹುಪಾಲು ಜನರ ಮೂಲ ಕಸುಬು. ರಾಜ್ಯದ ಬಹುಪಾಲು ಜನರ ಜೀವನೋಪಾಯವಾಗಿ ಮುಂದುವರೆದಿರುವ ಕೃಷಿ ಕ್ಷೇತ್ರ; ನಮ್ಮ ಜನರ ಆಲೋಚನೆ ಪರಿಕಲ್ಪನೆ ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಹಿನ ಪರಿಣಾಮ ಬೀರಿದೆ. “ಕೃಷಿತೋ ನಾಸ್ತಿ ದುರ್ಭಿಕ್ಷಂ” -ನಂತೆ ನಮ್ಮ ನಾಡಿನ ರೈತಸಮುದಾಯವು ಇಂದಿಗೂ ಕೃಷಿಯ ಬಗ್ಗೆ ಜಾಗೃತವಾಗಿದ್ದು, ಕೃಷಿ ವೃತ್ತಿಯ ಬಗ್ಗೆ ಗೌರವ, ಕಾಳಜಿ ಮುಂದುವರೆದಿದೆ.
ರೈತ ಸಂಪರ್ಕ ಕೇಂದ್ರ
ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ “ರೈತ ಮಿತ್ರ ಯೋಜನೆ” ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ.ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು “ರೈತ ಸಂಪರ್ಕ ಕೇಂದ್ರಗಳು” ಎಂದು ಕರೆಯಲಾಗುತ್ತಿದೆ.ರಾಜ್ಯದಲ್ಲಿ ಪ್ರಸ್ತುತ 740ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.
ಸಂಪರ್ಕಿಸಿ:
ಜಂಟಿ ಕೃಷಿ ನಿರ್ದೇಶಕರು,ಕೊಪ್ಪಳ
ದೂರವಾಣಿ ಸಂಖ್ಯೆ : 08539-221633