ಮುಚ್ಚಿ

ಪೊಲೀಸ್

ಕರ್ನಾಟಕದ ಪೊಲೀಸರಾದ ನಾವು ಸಾರ್ವಜನಿಕ ಹಕ್ಕುಗಳನ್ನು ರಕ್ಷಿಸಿ, ಕಾನೂನನ್ನು ಎತ್ತಿ ಹಿಡಿಯಲು ಪ್ರತಿಜ್ಞಾಬದ್ದರಾಗಿದ್ದೇವೆ. ಇದನ್ನು ಸಾಧಿಸಲು ನಾವು ಈ ಕೆಳಗಿನ ಗುರಿಗಳನ್ನು ನಮ್ಮ ಮುಂದಿರಿಸಿ ಕೊಂಡಿದ್ದೇವೆ.

  • ಅಪರಾಧಿಗಳಿಂದ ಮತ್ತು ಸಾಮಾಜ ಘಾತುಕ ಶಕ್ತಿಗಳಿಂದ ಸಾರ್ವಜನಿಕರ ಪ್ರಾಣ ಮತ್ತು ಹಕ್ಕುಗಳನ್ನು ಕಾಪಾಡುವುದು.
  • ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದರಲ್ಲಿ ಸಮಾಜದ ಸಹಕಾರವನ್ನು ಗಳಿಸುವುದು.
  • ಎಲ್ಲರಿಗೂ ವಿಳಂಬವಿಲ್ಲದ ನ್ಯಾಯ ದೊರಕುವಂತೆ ಮಾಡಲು ನ್ಯಾಯ ವ್ಯವಸ್ಥೆಯ ಇತರೆ ಎಲ್ಲಾ ಇಲಾಖೆಗಳೊಡನೆ ಸಹಕರಿಸುವುದು.
  • ಜಾತಿ, ಧರ್ಮ, ಸಾಮಾಜಿಕ, ಆರ್ಥಿಕ ಸ್ಥಾನಮಾನ ಅಥವಾ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೇ ಎಲ್ಲಾ ನಾಗರಿಕರನ್ನು ಸಮಾನವಾಗಿ ನೋಡುವುದು.
  • ಪೊಲೀಸ್ ಕರ್ತವ್ಯದಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳಿಗೆ ಸಮುಚಿತವಾದ ಸೌಜನ್ಯವನ್ನೂ, ಉದಾರತೆಯನ್ನೂ ತೋರಿಸುವುದು.
  • ವೃತ್ತಿಪರ ಜ್ಞಾನವನ್ನು, ಕುಶಲತೆಯನ್ನು ಹೆಚ್ಚಿಸಿಕೊಳ್ಳಲು ಸತತವಾಗಿ ಶ್ರಮಿಸುತ್ತೇವೆ ಹಾಗೂ ಪೊಲೀಸ್ ಇಲಾಖೆಯ ಕೆಲಸದಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಕೊಳ್ಳುವುದು.
  • ಪ್ರಮಾಣಿಕತೆ, ನೇರನಡೆ ಹಾಗೂ ವೃತ್ತಿ ಮೌಲ್ಯಗಳನ್ನು ಕಾಪಾಡುವುದು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು.  
  • ಸಾಮಾಜಿಕ ಬದಲಾವಣೆಯಲ್ಲಿ ನಮ್ಮ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸರಿಯಾಗಿ ನಿರ್ವಹಿಸಿ, ಸಮಾಜದೊಳಗೆ ಜೀವನದ ಗುಣಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುವುದು.

ಕೊಪ್ಪಳ ಜಿಲ್ಲಾ ಪೊಲೀಸ್ ವೆಬ್‌ಸೈಟ್‌ಗೆ ಭೇಟಿ ನೀಡಿ


ಜಿಲ್ಲಾ ಪೊಲೀಸ್ ಠಾಣೆ ಪಟ್ಟಿ
ಪೊಲೀಸ್ ಠಾಣೆ ವೃತ್ತ ಉಪವಿಭಾಗ
ಕೊಪ್ಪಳ ನಗರ ಠಾಣೆ ಕೊಪ್ಪಳ ಉಪವಿಭಾಗ
ಕೊಪ್ಪಳ ಸಂಚಾರ ಠಾಣೆ ಕೊಪ್ಪಳ ಉಪವಿಭಾಗ
ಮಹಿಳಾ ಠಾಣೆ ಕೊಪ್ಪಳ ಉಪವಿಭಾಗ
ಕೊಪ್ಪಳ ಗ್ರಾಮೀಣ ಠಾಣೆ ಕೊಪ್ಪಳ ಗ್ರಾಮೀಣ ಕೊಪ್ಪಳ ಉಪವಿಭಾಗ
ಮುನಿರಾಬಾದ ಠಾಣೆ ಕೊಪ್ಪಳ ಗ್ರಾಮೀಣ ಕೊಪ್ಪಳ ಉಪವಿಭಾಗ
ಅಳವಂಡಿ ಠಾಣೆ ಕೊಪ್ಪಳ ಗ್ರಾಮೀಣ ಕೊಪ್ಪಳ ಉಪವಿಭಾಗ
ಯಲಬುರ್ಗಾ ಠಾಣೆ ಯಲಬುರ್ಗಾ ಕೊಪ್ಪಳ ಉಪವಿಭಾಗ
ಕೂಕನೂರ ಠಾಣೆ ಯಲಬುರ್ಗಾ ಕೊಪ್ಪಳ ಉಪವಿಭಾಗ
ಬೇವೂರ ಠಾಣೆ ಯಲಬುರ್ಗಾ ಕೊಪ್ಪಳ ಉಪವಿಭಾಗ
ಗಂಗಾವತಿ ನಗರ ಠಾಣೆ ಗಂಗಾವತಿ ಉಪವಿಭಾಗ
ಗಂಗಾವತಿ ಸಂಚಾರ ಠಾಣೆ ಗಂಗಾವತಿ ಉಪವಿಭಾಗ
ಗಂಗಾವತಿ ಗ್ರಾಮೀಣ ಠಾಣೆ ಗಂಗಾವತಿ ಗ್ರಾಮೀಣ ಗಂಗಾವತಿ ಉಪವಿಭಾಗ
ಕಾರಟಗಿ ಠಾಣೆ ಗಂಗಾವತಿ ಗ್ರಾಮೀಣ ಗಂಗಾವತಿ ಉಪವಿಭಾಗ
ಕನಕಗಿರಿ ಠಾಣೆ ಗಂಗಾವತಿ ಗ್ರಾಮೀಣ ಗಂಗಾವತಿ ಉಪವಿಭಾಗ
ಕುಷ್ಟಗಿ ಠಾಣೆ ಕುಷ್ಟಗಿ ಗಂಗಾವತಿ ಉಪವಿಭಾಗ
ತಾವರಗೇರಾ ಠಾಣೆ ಕುಷ್ಟಗಿ ಗಂಗಾವತಿ ಉಪವಿಭಾಗ
ಹನಮಸಾಗರ ಠಾಣೆ ಕುಷ್ಟಗಿ ಗಂಗಾವತಿ ಉಪವಿಭಾಗ
ಸಿ.ಇ.ಎನ್. ಠಾಣೆ