ಕರ್ನಾಟಕದ ಪೊಲೀಸರಾದ ನಾವು ಸಾರ್ವಜನಿಕ ಹಕ್ಕುಗಳನ್ನು ರಕ್ಷಿಸಿ, ಕಾನೂನನ್ನು ಎತ್ತಿ ಹಿಡಿಯಲು ಪ್ರತಿಜ್ಞಾಬದ್ದರಾಗಿದ್ದೇವೆ. ಇದನ್ನು ಸಾಧಿಸಲು ನಾವು ಈ ಕೆಳಗಿನ ಗುರಿಗಳನ್ನು ನಮ್ಮ ಮುಂದಿರಿಸಿ ಕೊಂಡಿದ್ದೇವೆ.
- ಅಪರಾಧಿಗಳಿಂದ ಮತ್ತು ಸಾಮಾಜ ಘಾತುಕ ಶಕ್ತಿಗಳಿಂದ ಸಾರ್ವಜನಿಕರ ಪ್ರಾಣ ಮತ್ತು ಹಕ್ಕುಗಳನ್ನು ಕಾಪಾಡುವುದು.
- ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದರಲ್ಲಿ ಸಮಾಜದ ಸಹಕಾರವನ್ನು ಗಳಿಸುವುದು.
- ಎಲ್ಲರಿಗೂ ವಿಳಂಬವಿಲ್ಲದ ನ್ಯಾಯ ದೊರಕುವಂತೆ ಮಾಡಲು ನ್ಯಾಯ ವ್ಯವಸ್ಥೆಯ ಇತರೆ ಎಲ್ಲಾ ಇಲಾಖೆಗಳೊಡನೆ ಸಹಕರಿಸುವುದು.
- ಜಾತಿ, ಧರ್ಮ, ಸಾಮಾಜಿಕ, ಆರ್ಥಿಕ ಸ್ಥಾನಮಾನ ಅಥವಾ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೇ ಎಲ್ಲಾ ನಾಗರಿಕರನ್ನು ಸಮಾನವಾಗಿ ನೋಡುವುದು.
- ಪೊಲೀಸ್ ಕರ್ತವ್ಯದಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳಿಗೆ ಸಮುಚಿತವಾದ ಸೌಜನ್ಯವನ್ನೂ, ಉದಾರತೆಯನ್ನೂ ತೋರಿಸುವುದು.
- ವೃತ್ತಿಪರ ಜ್ಞಾನವನ್ನು, ಕುಶಲತೆಯನ್ನು ಹೆಚ್ಚಿಸಿಕೊಳ್ಳಲು ಸತತವಾಗಿ ಶ್ರಮಿಸುತ್ತೇವೆ ಹಾಗೂ ಪೊಲೀಸ್ ಇಲಾಖೆಯ ಕೆಲಸದಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಕೊಳ್ಳುವುದು.
- ಪ್ರಮಾಣಿಕತೆ, ನೇರನಡೆ ಹಾಗೂ ವೃತ್ತಿ ಮೌಲ್ಯಗಳನ್ನು ಕಾಪಾಡುವುದು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು.
- ಸಾಮಾಜಿಕ ಬದಲಾವಣೆಯಲ್ಲಿ ನಮ್ಮ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸರಿಯಾಗಿ ನಿರ್ವಹಿಸಿ, ಸಮಾಜದೊಳಗೆ ಜೀವನದ ಗುಣಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುವುದು.
ಕೊಪ್ಪಳ ಜಿಲ್ಲಾ ಪೊಲೀಸ್ ವೆಬ್ಸೈಟ್ಗೆ ಭೇಟಿ ನೀಡಿ
| ಜಿಲ್ಲಾ ಪೊಲೀಸ್ ಠಾಣೆ ಪಟ್ಟಿ | ||
|---|---|---|
| ಪೊಲೀಸ್ ಠಾಣೆ | ವೃತ್ತ | ಉಪವಿಭಾಗ |
| ಕೊಪ್ಪಳ ನಗರ ಠಾಣೆ | – | ಕೊಪ್ಪಳ ಉಪವಿಭಾಗ |
| ಕೊಪ್ಪಳ ಸಂಚಾರ ಠಾಣೆ | – | ಕೊಪ್ಪಳ ಉಪವಿಭಾಗ |
| ಮಹಿಳಾ ಠಾಣೆ | – | ಕೊಪ್ಪಳ ಉಪವಿಭಾಗ |
| ಕೊಪ್ಪಳ ಗ್ರಾಮೀಣ ಠಾಣೆ | ಕೊಪ್ಪಳ ಗ್ರಾಮೀಣ | ಕೊಪ್ಪಳ ಉಪವಿಭಾಗ |
| ಮುನಿರಾಬಾದ ಠಾಣೆ | ಕೊಪ್ಪಳ ಗ್ರಾಮೀಣ | ಕೊಪ್ಪಳ ಉಪವಿಭಾಗ |
| ಅಳವಂಡಿ ಠಾಣೆ | ಕೊಪ್ಪಳ ಗ್ರಾಮೀಣ | ಕೊಪ್ಪಳ ಉಪವಿಭಾಗ |
| ಯಲಬುರ್ಗಾ ಠಾಣೆ | ಯಲಬುರ್ಗಾ | ಕೊಪ್ಪಳ ಉಪವಿಭಾಗ |
| ಕೂಕನೂರ ಠಾಣೆ | ಯಲಬುರ್ಗಾ | ಕೊಪ್ಪಳ ಉಪವಿಭಾಗ |
| ಬೇವೂರ ಠಾಣೆ | ಯಲಬುರ್ಗಾ | ಕೊಪ್ಪಳ ಉಪವಿಭಾಗ |
| ಗಂಗಾವತಿ ನಗರ ಠಾಣೆ | – | ಗಂಗಾವತಿ ಉಪವಿಭಾಗ |
| ಗಂಗಾವತಿ ಸಂಚಾರ ಠಾಣೆ | – | ಗಂಗಾವತಿ ಉಪವಿಭಾಗ |
| ಗಂಗಾವತಿ ಗ್ರಾಮೀಣ ಠಾಣೆ | ಗಂಗಾವತಿ ಗ್ರಾಮೀಣ | ಗಂಗಾವತಿ ಉಪವಿಭಾಗ |
| ಕಾರಟಗಿ ಠಾಣೆ | ಗಂಗಾವತಿ ಗ್ರಾಮೀಣ | ಗಂಗಾವತಿ ಉಪವಿಭಾಗ |
| ಕನಕಗಿರಿ ಠಾಣೆ | ಗಂಗಾವತಿ ಗ್ರಾಮೀಣ | ಗಂಗಾವತಿ ಉಪವಿಭಾಗ |
| ಕುಷ್ಟಗಿ ಠಾಣೆ | ಕುಷ್ಟಗಿ | ಗಂಗಾವತಿ ಉಪವಿಭಾಗ |
| ತಾವರಗೇರಾ ಠಾಣೆ | ಕುಷ್ಟಗಿ | ಗಂಗಾವತಿ ಉಪವಿಭಾಗ |
| ಹನಮಸಾಗರ ಠಾಣೆ | ಕುಷ್ಟಗಿ | ಗಂಗಾವತಿ ಉಪವಿಭಾಗ |
| ಸಿ.ಇ.ಎನ್. ಠಾಣೆ | – | – |