• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟ್ ನಕ್ಷೆ
  • ಪ್ರವೇಶಿಸುವಿಕೆ ಲಿಂಕ್‌ಗಳು
  • ಕನ್ನಡ
ಮುಚ್ಚಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು. ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ತನ್ನ ವಿವಿಧ ಸ್ತರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಆಡಳಿತ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಡಳಿತ ವ್ಯವಸ್ಥೆಯು ಮೂರು ಹಂತಗಳನ್ನು ಹೊಂದಿರುತ್ತದೆ.

  • ರಾಜ್ಯ ಮಟ್ಟದ ಆಡಳಿತ: ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ತಾಂತ್ರಿಕ ಮುಖ್ಯಸ್ಥರಾಗಿದ್ದು, ಆಯುಕ್ತರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
  • ಜಿಲ್ಲಾ ಮಟ್ಟದ ಆಡಳಿತ: ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಜಿಲ್ಲಾ ಮಟ್ಟದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಉಪ ನಿರ್ದೇಶಕರು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
  • ತಾಲ್ಲೂಕು ಮಟ್ಟದ ಆಡಳಿತ: ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ತಾಲ್ಲೂಕು ಮಟ್ಟದ ಮುಖ್ಯಸ್ಥರಾಗಿರುತ್ತಾರೆ.

ಸಂಪರ್ಕಿಸಿ:

ಉಪ ನಿರ್ದೇಶಕರು,
ದೂರವಾಣಿ ಸಂಖ್ಯೆ: 08539-221408

ಹೆಚ್ಚಿನ ಮಾಹಿತಿ…