ಮುಚ್ಚಿ

ಪ್ರವಾಸೋದ್ಯಮ

ಕೊಪ್ಪಳ-ಪ್ರಾಚೀನತೆ

ಕೊಪ್ಪಳವು ಪ್ರಸಿದ್ಧವಾದ ಪ್ರಾಚೀನ ಹಾಗೂ ಮೂಲ ನೆಲೆಯೂ ಆಗಿದೆ. ಆದಿಮಾನವನ ಕಾಲದಿಂದಲೂ ವಸತಿಯ ತಾಣವಾಗಿದ್ದಿತು. ಕೊಪ್ಪಳ ಜಿಲ್ಲೆಗೆ ಸೇರಿದ ಅನೇಕ ಸ್ಥಳಗಳು ಪ್ರಾಚೀನ ನೆಲೆಗಳಾಗಿವೆ. ಅವುಗಳಲ್ಲಿ ; ಹಿರೇಬೆಣಕಲ್ಲ, ಆನೆಗೊಂದಿ, ಮಲ್ಲಾಪೂರ, ಇಂದರಗಿ, ಅಂಜನಹಳ್ಳಿ, ಬಂಡಿಹರ್ಲಾಪೂರ, ವೆಂಕಟಾಪುರ ಮೊದಲಾದವು ಸೇರಿವೆ. ಇದರಲ್ಲಿ ಆನೆಗೊಂದಿ ಪ್ರದೇಶವು ಹಂಪೆ ಪರಿಸರವನ್ನೊಳಗೊಂಡಂತೆ ರಾಮಾಯಣ ಕಾಲದಿಂದಲೂ ಬಹು ಪ್ರಸಿದ್ಧಿಯನ್ನು ಹೊಂದಿದೆ. ಈ ಪರಿಸರದಲ್ಲಿರುವ ಕಿಷ್ಕಿಂದೆ, ಅಯೋಧ್ಯೆ, ಅಂಜನಾದ್ರಿ, ಶಬರಿಗುಹೆ, ಸೀತಾ ಸೆರಗು, ಸುಗ್ರೀವ ಗುಹೆಗಳು ರಾಮಾಯಣದ ಘಟನೆಗಳನ್ನು ಕಣ್ಮುಂದೆ ತರುತ್ತದೆ. ಹಾಗೆಯೇ ಶಿವ-ಪಾರ್ವತಿಯರ ಕ್ಷೇತ್ರವೆಂದು ಹಂಪೆಯ ಹೇಮಕೂಟ, ಆನೆಗೊಂದಿ ಬಳಿಯ ಪಂಪಾಸರೋವರ ಸ್ಥಳಗಳನ್ನು ಹೆಸರಿಸಲಾಗಿದೆ.