ಮುಚ್ಚಿ

ಜಿಲ್ಲೆಯ ಬಗ್ಗೆ

ಕೊಪ್ಪಳವನ್ನು ಶಾತವಾಹನರು, ಗಂಗರು, ಹೊಯ್ಸಳರು ಮತ್ತು ಚಾಲುಕ್ಯ ರಾಜವಂಶಗಳ ರಾಜ್ಯಕ್ಕಿಂತ ಮೊದಲು ಪತ್ತೆಹಚ್ಚಲಾಗಿದೆ. “ಕೊಪ್ಪಳ” ಎಂಬ ಹೆಸರು “ವಿದಿತ ಮಹಾ ಕೊಪಣ ನಗರ” ಎಂದು (814-878 ಕ್ರಿ.ಶ ರಾಜ ನೃಪತುಂಗರ ಕಾಲದಲ್ಲಿ) ಮಹಾನ್ ಕವಿ ಕವಿರಾಜಮಾರ್ಗ ಕಾವ್ಯದಿಂದ ಆಯ್ಕೆ ಮಾಡಲಾಗಿದೆ. ಅಶೋಕನ ಕಾಲದಲ್ಲಿ ಜೈನ ಧರ್ಮವು ಈ ಪ್ರದೇಶದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿತು. ಆದ್ದರಿಂದ, ಇದನ್ನು “ಜೈನಕಾಶಿ” ಎಂದು ಕರೆಯಲಾಗುತ್ತದೆ. ಪ್ರಸ್ತುತ ಕೊಪ್ಪಳದ ಗವಿ ಮಠವು ಪ್ರಮುಖ ಆಕರ್ಷಣೆ ಹೊಂದಿದೆ.

ಗಂಗಾವತಿ ತಾಲ್ಲೂಕಿನ ಆನೆಗುಂದಿಯು ವಿಜಯನಗರ ರಾಜವಂಶದ ಮೊದಲ ರಾಜಧಾನಿಯಾಗಿತ್ತು. ಹಳೆಯ ಅರಮನೆ ಮತ್ತು ಕೋಟೆ ಆನೆಗುಂದಿಯಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಕೊಪ್ಪಳ ಜಿಲ್ಲೆಯ ಇತರ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ  ಹುಲಿಗಿ,ಕನಕಗಿರಿ, ಇಟಗಿ, ಕುಕನೂರ, ಇಂದ್ರಕೀಲ ಪರ್ವತ,  ಪುರ, ಚಿಕ್ಕಬೇನಕಲ್ ಮತ್ತು ಹಿರೆಬೇನಕಲ್  ಇವೆ. ಸ್ವಾತಂತ್ರ್ಯ ಪೂರ್ವದಲ್ಲಿ, ಕೊಪ್ಪಳವು ಹೈದರಾಬಾದ್ ನಿಜಾಮರ ಅಡಿಯಲ್ಲಿತ್ತು ಹಾಗೂ ಹೈದರಾಬಾದ್ ಪ್ರದೇಶದ ಭಾಗವಾಗಿತ್ತು. ಭಾರತಕ್ಕೆ 15ನೇ ಆಗಸ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ, ಈ ಪ್ರದೇಶದ ಜನರು ಹೈದರಾಬಾದ್ ನಿಜಾಮರ ಹಿಡಿತದಿಂದ ಸ್ವಾತಂತ್ರ್ಯವನ್ನು ಗಳಿಸಲು ಮತ್ತಷ್ಟು ಹರಸಾಹಸ ಮಾಡಿ 17ನೇ ಸೆಪ್ಟೆಂಬರ್, 1948 ರಲ್ಲಿ, ಹೈದರಾಬಾದ್ ಕರ್ನಾಟಕ ನಿಜಾಮರಿಂದ ಬಿಡುಗಡೆಗೊಂಡಿತು. ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಟಗಿ & ಯಲಬುರ್ಗಾ ಹಾಗೂ ಹೊಸದಾಗಿ ರೂಪುಗೊಂಡ (19.01.2018) ಕನಕಗಿರಿ,ಕಾರಟಗಿ, ಕುಕನೂರ(18.01.2018)  ತಾಲ್ಲೂಕುಗಳು ಒಳಗೊಂಡಿದೆ