ಮುಚ್ಚಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಕೊಪ್ಪಳ ಆರ್.ಸಿ.ಎಚ್ ವರದಿ 2017-18

 • ಜನನಿ ಸರುಕ್ಷಾ ಯೋಜನೆ : ಜನನಿ ಸರುಕ್ಷಾ ಯೋಜನೆಯಡಿಯಲ್ಲಿ 2017-18ನೇ ಸಾಲಿನಲ್ಲಿ ಒಟ್ಟು 8425 ಫಲಾನುಭವಿಗಳಿಗೆ ಹೆರಿಗೆಯಾದ ನಂತರ 52,68,046/- ಲಕ್ಷ ರೂಗಳ ಅನುದಾನವನ್ನು ಪಿ ಎಫ್ ಎಮ್ ಎಸ್ ಮುಖಾಂತರ ಸಂದಾಯ ಮಾಡಲಾಗಿದೆ.
 • ಪ್ರಸೂತಿ ಆರೈಕೆ : ಪ್ರಸೂತಿ ಆರೈಕೆ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಪೌಷ್ಠಿಕಾಂಶ ಒದಗಿಸಲು ಹಣಕಾಸಿನ ನೆರವು ನೀಡಲಾಗುತ್ತಿದ್ದು 2017-18ನೇ ಸಾಲಿನಲ್ಲಿ 3596 ಫಲಾನುಭವಿಗಳಿಗೆ ಒಟ್ಟು 16,52,600/- ರೂಗಳ ಅನುದಾನವನ್ನು ಚಕ್ ಮುಖಾಂತರ ಸಂದಾಯ ಮಾಡಲಾಗಿದೆ.
 • ಜನನಿ ಶಿಶು ಸುರಕ್ಷಾ ಕಾರ್ಯಕ್ರಮ : ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಜಾರಿಯಲ್ಲಿರುವ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಯೋಜನೆಯಡಿಲ್ಲಿ 2017-18ರ ಸಾಲಿನಲ್ಲಿ 23854 ಫಲಾನುಭವಿಗಳಿಗೆ ಉಚಿತವಾಗಿ ಔಷದೋಪಚಾರ, ಪ್ರಯೋಗಾಲಯದ ಆರೋಗ್ಯ ತಪಾಸಣೆ, ಆಹಾರ ವಿತರಣೆ ಮತ್ತು ಬ್ಲಡ್ ಟ್ರಾನ್ಸ್‍ಫ್ಯೂಜನ್‍ಗೆ ಎಂದು ಒಟ್ಟು 1,25,85,254/- ರೂಗಳ ಅನುದಾನವನ್ನು ವೆಚ್ಛ ಮಾಡಲಾಗಿದೆ.
 • ನಗುಮಗು : ಹೆರಿಗೆಯ ನಂತರ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಗುಮಗು ಕಾರ್ಯಕ್ರಮವು ಜಾರಿಯಲ್ಲಿದ್ದು, 2017-18ನೇ ಸಾಲಿನಲ್ಲಿ 7378 ಫಲಾನುಭವಿಗಳನ್ನು ಈ ಕಾರ್ಯಕ್ರಮಡಿಯಲ್ಲಿ ಆಸ್ಪತ್ರೆಯಿಂದ ಮನೆಗೆ ಸುರಕ್ಷಿತವಾಗಿ ತಲುಪಿಸಲಾಗಿದೆ.
 • ಜನನಿ ಸುರಕ್ಷಾ ವಾಹಿನಿ (ಜೆ.ಎಸ್.ವಿ) : ಗರ್ಭಿಣಿ ಮತ್ತು ಬಾಣಂತಿಯರ ತುರ್ತುಸೇವೆಗಾಗಿ ಜಿಲ್ಲೆಯಲ್ಲಿ ಒಟ್ಟು 07 ಜೆ.ಎಸ್.ವಿ ಅಂಬುಲೆನ್ಸ್ ವಾಹನಗಳಿದ್ದು 2017-18ನೇ ಸಾಲಿನಲ್ಲಿ 2453 ಫಲಾನುಭವಿಗಳಿಗೆ ಸೇವೆಯನ್ನು ನೀಡಲಾಗಿದೆ.
 • 108 ಅಂಬುಲೆನ್ಸ್ : ತುರ್ತು ಚಿಕಿತ್ಸೆಗಳಿಗೆಲ್ಲ ಅಂಬುಲೆನ್ಸ್ ವಾಹನ ಕೂಡಲೆ ಲಭ್ಯವಾಗುವ ಉದ್ದೇಶದಿಂದ ರಾಜ್ಯ ಸರಕಾರವು 108 ಅಂಬುಲೆನ್ಸ್ ಸೇವೆ ಆರಂಭಿಸಿದ್ದು, ಜಿಲ್ಲೆಯಲ್ಲಿ 17 ಅಂಬುಲೆನ್ಸ್‍ಗಳಿದ್ದು 2017-18ನೇ ಸಾಲಿನಲ್ಲಿ 108ನ ಅಂಬುಲೆನ್ಸ್‍ಗಳಲ್ಲಿ 16452 ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗಳಿಗೆ ಹೆರಿಗೆಗೆಂದು ಕರೆತರಲಾಗಿದೆ.
 • ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ : ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮಡಿಯಲ್ಲಿ 1 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಸರಕಾರಿ ಹಾಗೂ ಸರಿಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯ ತಾಸಣೆಯನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿಯಲ್ಲಿ 11 ತಂಡಗಳಿದ್ದು ಪ್ರತಿ ತಂಡದಲ್ಲಿ 2 ವೈದ್ಯರು ಹಾಗೂ ಒಬ್ಬ ಶುಶ್ರೂಷಕಿ ಒಬ್ಬ ನೇತ್ರ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. 2017-18ನೇ ಸಾಲಿನಲ್ಲಿ ಒಟ್ಟು 3,83,183 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.
 • ವಿಶೇಷ ನವಜಾತ ಆರೈಕೆ ಘಟಕ(SNCU ) : ಕಡಿಮೆ ಹುಟ್ಟು ತೂಕದ ಹಾಗೂ ಖಾಯಿಲೆಗಳಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎಸ್.ಎನ್.ಸಿ.ಯು ಘಟಕವನ್ನು ಸ್ಥಾಪಿಸಲಾಗಿದೆ. 2017-18ನೇ ಸಾಲಿನಲ್ಲಿ 1370 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.
 • ನ್ಯೂಟ್ರಿಷನ್ ಪುನರ್ವಸತಿ ಕೇಂದ್ರ(NRC) : ಅಪೌಷ್ಠಿಕತೆಯಿಂದ ಬಳಲಿ ಮಕ್ಕಳು ಸಾವನ್ನಪ್ಪಬಾರದೆಂಬ ಉದ್ದೇಶದಿಂದ ಮತ್ತು ಮಕ್ಕಳ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಪ್ರಮಾಣ ಬದ್ದ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡುವ ಮತ್ತು ಚಿಕಿತ್ಸೆ ನೀಡುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎನ್.ಆರ್.ಸಿ ಘಟಕವನ್ನು ಸ್ಥಾಪಿಸಲಾಗಿದೆ. 2017-18ನೇ ಸಾಲಿನಲ್ಲಿ 232 ಮಕ್ಕಳನ್ನು ದಾಖಲಿಸಿ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡಲಾಗಿದೆ.
 • ರಾಷ್ಟ್ರೀಯ ಸದೃಡ ದಿನ (NDD) : ಕೇಂದ್ರ ಸರಕಾರದಿಂದ ಫೆಬ್ರವರಿ ಹಾಗೂ ಅಗಸ್ಟ್ ತಿಂಗಳಲ್ಲಿ ಮಕ್ಕಳಲ್ಲಿ ಜಂತು ಹುಳು ನಿರ್ಮೂಲನೆ ಮಾಡಿ ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಡಮಾಡಲು ಜಂತುಹುಳು ನಿರ್ಮೂಲನಾ ಮಾತ್ರೆಗಳನ್ನು ಮಕ್ಕಳಿಗೆ ಉಚಿತವಾಗಿ ನುಂಗಿಸಲಾಗುತ್ತದೆ. ಈ ನಿಟ್ಟಿನಲ್ಲಿ 2017-18ನೇ ಸಾಲಿನಲ್ಲಿ ಅಗಸ್ಟ್-17 ಮಾಹೆಯಲ್ಲಿ 4,59,968 ಮತ್ತು ಫೆಬ್ರುವರಿ-18 ಮಾಹೆಯಲ್ಲಿ 439370 ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನು ನುಂಗಿಸಲಾಗಿದೆ.
 • ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ : ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿಯಲ್ಲಿ 0 ಯಿಂದ 5 ವರ್ಷದೊಳಗಿನ ಒಟ್ಟು 183992 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದು, ಮೊದಲ ಸುತ್ತಿನಲ್ಲಿ 193045 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿ 104% ಸಾಧನೆ ಮತ್ತು ಎರಡನೇ ಸುತ್ತಿನಲ್ಲಿ 194017 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿ 105.45% ಸಾಧನೆ ಮಾಡಲಾಗಿದೆ .
 • ಮಾ ಕಾರ್ಯಕ್ರಮ : ಎಲ್ಲ ನವಜಾತ ಶಿಶುಗಳಿಗೆ ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸಲೇ ಬೇಕು ಎಂಬ ಉದ್ದೇಶದಿಂದ ಮಾ ಕಾರ್ಯಕ್ರಮವನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ 27980 ಜೀವಂತ ಜನನಗಳಾಗಿದ್ದು ಅದರಲ್ಲಿ 25478 ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಮೂಲಕ ಶೇ 91% ಸಾಧನೆಯನ್ನು ಮಾಡಿದೆ.
 • ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿ.ಎಮ್.ಎಸ್.ಎಮ್.ಎ) : ಈ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಗರ್ಭಿಣಿಯಾದ ಮಹಿಳೆಯನ್ನು ಮೂರು ತಿಂಗಳೊಳಗೆ ಪತ್ತೆ ಹಚ್ಚಿ ನೊಂದಣಿಮಾಡಿಕೊಳ್ಳುವುದು. ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಉಚಿತವಾಗಿ ತಪಾಸಣೆಗೆ ಒಳಪಡಿಸುವುದು ಮತ್ತು ಪ್ರತಿ ಗರ್ಭಿಣಿ ಮಹಿಳೆಯು ತನ್ನ ಗರ್ಭಾವಸ್ಥೆಯಲ್ಲಿ ಒಮ್ಮೆಯಾದರೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಎಂಬುವ ಉದ್ದೇಶದಿಂದ ದೇಶಾದ್ಯಂತ ಪ್ರತಿ ತಿಂಗಳು 9ನೇ ತಾರಿಖಿನಂದು ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಎಪ್ರೀಲ್-2017 ರಿಂದ ಮಾರ್ಚ್-2018 ರವೆರೆಗೆ 15267 ಗರ್ಭಿಣಿಯರನ್ನು ತಪಾಸಣೆ ಮಾಡಲಾಗಿದೆ.
 • ಶುಚಿ : ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ನೀಡುವ ಉದ್ದೆಶದಿಂದ ರಾಜ್ಯ ಸರಕಾರವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 394713 ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಶಾಲೆಗಳಿಗೆ, ಹಾಸ್ಟೆಲ್‍ಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ವಿತರಿಸಲಾಗಿದೆ.
 • ಸಾಪ್ತಾಹಿಕ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಪೂರಕ (WIFS): 6 ವರ್ಷದಿಂದ 16 ವರ್ಷದೊಳಗಿನ ಎಲ್ಲ ಶಾಲಾ ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆಗಳನ್ನು ನೀಡುವ ಉದ್ದೇಶದಿಂದ ರಾಜ್ಯ ಸರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಪ್ರತಿ ಸೋಮವಾರ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಿ ಮಕ್ಕಳನ್ನು ಸದೃಡವಾಗಿ ಮಾಡಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 2,20,538 ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆಗಳನ್ನು ಉಚಿತವಾಗಿ ನೀಡಲಾಗಿದೆ.
 • ರಾಷ್ಟ್ರೀಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜೋತಿ ಸಂಜೀವಿನಿ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ-ಹಿರಿಯ ನಾಗರಿಕರಿಗೆ, ವಾಜಪೇಯಿ ಆರೋಗ್ಯ ಶ್ರೀ, ಇಂದಿರಾ ಸ್ವಾಸ್ಥ್ಯ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ, ಹರೀಶ್ ಸಾಂತ್ವನ ಯೋಜನೆಗಳಡಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಮೇಲ್ಕಾಣಿಸಿದ ಕಾರ್ಯಕ್ರಮಗಳಿಗಾಗಿ ಅನುದಾನವನ್ನು ಬಳಕೆ ಮಾಡಲಾಗಿರುತ್ತದೆ.
 • ಕಾಯಕಲ್ಪ ಪ್ರಶಸ್ಥಿ :
  1. ಪ್ರಶಸ್ಥಿ ವಿಜೈತ ಸಂಸ್ಥೆ : ಗಂಗಾವತಿ ತಾಲೂಕ ಆಸ್ಪತ್ರೆ
  2. ಪ್ರಶಂಶನ ಪ್ರಶಸ್ಥಿ : ಸ.ಆ ಕೇ.ಶ್ರೀರಾಮನಗರ,ಸ.ಆ.ಕೇ.ತಾವರಗೆರಾ ,ಸ.ಆ.ಕೇ ಹೀರೆಸಿಂದೋಗಿ.
  3. ಉತ್ತಮ ಪ್ರಾ.ಆ.ಕೇ ಪ್ರಶಸಿ : ಕುಕನಪಳ್ಳಿ
  4. ಪ್ರಶಂಶನ ಪ್ರಶಸ್ಥಿ : ಬನ್ನಿಕೊಪ್ಪ, ಬೂದಗುಂಪಾ, ಹುಲಗಿ, ದೋಟಿಹಾಳ, ಗೀಣಿಗೇರಾ, ಕೊಪ್ಪಳ.
  5. ಕೊಪ್ಪಳ ಜಿಲ್ಲೆಯು ಎನ್.ಕ್ಯೂ.ಎ.ಎಸ್.ದಿಂದ ಮಾನ್ಯತೆ ಪಡೆದಿದೆ.

ಸಂಪರ್ಕಿಸಿ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಕೊಪ್ಪಳ

ಫೋನ್: 08539-221303

ಹೆಚ್ಚಿನ ಮಾಹಿತಿ…